ಸಾರ್ವಜನಿಕ ಕುಂದುಕೊರತೆ ಅರ್ಜಿಗಳ ನಿರ್ವಹಣೆ

 

E-JANASPANDANA:- ಸಾರ್ವಜನಿಕರಿಂದ ಸ್ವೀಕರಿಸುವ ಕುಂದುಕೊರತೆಗಳ ಅರ್ಜಿಗಳನ್ನು ಯಾವುದೇ ವಿಳಂಬಕ್ಕೆ ಎಡೆಮಾಡಿಕೊಡದೆ ಅತೀ ಶೀಘ್ರವಾಗಿ ಆಯಾ ಕಛೇರಿಗಳು ವಿಲೇವಾರಿ ಮಾಡುವ ಮುಖ್ಯ ಉದ್ದೇಶ ಮತ್ತು ಆಶಯದಿಂದ ಸಿಆಸುಇ(ಜನಸ್ಪಂದನ ಕೋಶ)ಯಲ್ಲಿ ಸ್ವೀಕರಿಸುವ ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು “ಇ-ಜನಸ್ಪಂದನ” ಆನ್ ಲೈನ್ ನಲ್ಲಿ ಸರ್ಕಾರದ ಎಲ್ಲಾ ಇಲಾಖೆ/ಕಛೇರಿಗಳಿಗೆ ಕಳುಹಿಸಿಕೊಡಲಾಗುತ್ತದೆ.

 

CPGRAMS:- ಭಾರತ ಸರ್ಕಾರದಿಂದ ಕಳುಹಿಸಲ್ಪಡುವ ಕುಂದುಕೊರತೆ ಅರ್ಜಿಗಳನ್ನು ಕೇಂದ್ರ ಸರ್ಕಾರದ ಪಿಜಿ  ಪೋರ್ಟಲ್, ಸೆಂಟ್ರಲೈಸ್ಡ ಪಬ್ಲಿಕ ಗ್ರಿವನ್ಸ್ ರಿರ್ಡೆಸ್ ಮತ್ತು ಮಾನಿಟರಿಂಗ್ ಸಿಸ್ಟಂ (ಸಿಪಿಗ್ರಾಮ್ಸ್) ಮುಖಾಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಜನಸ್ಪಂದನ)ಯಲ್ಲಿ ಸ್ವೀಕೃತವಾಗುತ್ತವೆ. ಹಾಗೆ ಸ್ವೀಕರಿಸುವ ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು “ಇ-ಸ್ಪಂದನ” online ನಲ್ಲಿ ಸರ್ಕಾರದ ಎಲ್ಲಾ ಇಲಾಖೆ/ಕಛೇರಿಗಳಿಗೆ ಕಳುಹಿಸಿಕೊಡಲಾಗುತ್ತದೆ.

ಇತ್ತೀಚಿನ ನವೀಕರಣ​ : 25-07-2019 12:15 PM ಅನುಮೋದಕರು: Admin