ನಾಗರೀಕ ಸನ್ನದು

 

  1. ಸರ್ಕಾರದ ಆದೇಶ ಸಂಖ್ಯೆ: ಡಿಪಿಎಆರ್ 21 ಎಎಂಸಿ 83, ದಿನಾಂಕ ಜುಲೈ 1, 1983ರನ್ವಯ ಸಾರ್ವಜನಿಕ ಕುಂದುಕೊರತೆ ಸಂಸ್ಥೆ ರಚಿಸಲಾಗಿದೆ.
  2. ಸಾರ್ವಜನಿಕರಿಂದ ಕುಂದುಕೊರತೆ ಮನವಿಗಳನ್ನು ಸ್ವೀಕರಿಸುವ ಮತ್ತು ಅವುಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸುವುದು ಇಲಾಖೆಯ ಮೂಲೋದ್ದೇಶವಾಗಿದೆ.
  3. ಅಂಚೆ, ಇ-ಮೇಲ್, ಖುದ್ದು ಇತ್ಯಾದಿಯಾಗಿ ಸ್ವೀಕರಿಸಿದ ಸಾರ್ವಜನಿಕ ಕುಂದುಕೊರತೆ ಅರ್ಜಿಗಳನ್ನು ಪರಿಶೀಲನೆಯ ನಂತರ ಇ-ಜನಸ್ಪಂದನದಲ್ಲಿ ಆನ್ ಲೈನ್ ಮುಖಾಂತರ ಸ್ಕ್ಯಾನ್ ಮಾಡಿದ ಪ್ರತಿಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ಶೀಘ್ರ ಮುಂದಿನ ಕ್ರಮಕ್ಕಾಗಿ ಕಳುಹಿಸಿ, ಅದರ ಪ್ರತಿಯನ್ನು ಮನವಿದಾರರಿಗೆ ಕಳುಹಿಸಲಾಗುತ್ತಿದೆ.
  4. ಭಾರತ ಸರ್ಕಾರದಿಂದ ಕಳುಹಿಸಲ್ಪಡುವ ಕುಂದುಕೊರತೆ ಅರ್ಜಿಗಳನ್ನು ಕೇಂದ್ರ ಸರ್ಕಾರದ ಪಿಜಿ ಪೋರ್ಟಲ್, ಸೆಂಟ್ರಲೈಸ್ಡ ಪಬ್ಲಿಕ ಗ್ರಿವನ್ಸ್ ರಿರ್ಡೆಸ್ ಮತ್ತು ಮಾನಿಟರಿಂಗ್ ಸಿಸ್ಟಂ (ಸಿಪಿಗ್ರಾಮ್ಸ್) ಮುಖಾಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಜನಸ್ಪಂದನ)ಯಲ್ಲಿ ಸ್ವೀಕೃತವಾಗುತ್ತವೆ. ಈ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಆನ್ ಲೈನ್ ಮುಖಾಂತರ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ.
  5. ಇಲಾಖೆಯು ಮಾಹಿತಿ ಹಕ್ಕು ಅಧಿನಿಯಮ 2005ರ ಅನುಷ್ಠಾನಕ್ಕಾಗಿ ಸಮನ್ವಯ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದೆ.
  6. ಅಧಿಸೂಚನೆ ಸಂಖ್ಯೆ: ಡಿಪಿಎಆರ್ 109 ಆರ್ ಟಿಐ 2005, ದಿನಾಂಕ:05.08.2005   ರನ್ವಯ ಕರ್ನಾಟಕ ಮಾಹಿತಿ ಆಯೋಗವು 5ನೇ ಆಗಸ್ಟ್ 2005ರಂದು ರಚನೆಯಾಗಿದೆ.
  7. ಅಧಿಸೂಚನೆ ಸಂಖ್ಯೆ: ಡಿಪಿಎಆರ್ 91 ಆರ್ ಟಿ ಐ 2008(I) & (II), ದಿನಾಂಕ:30.10.2008 ಮತ್ತು03.2009ರನ್ವಯ ಮಾಹಿತಿ ಹಕ್ಕು ಕಾಯ್ದೆ, 2005 ರ ಅನುಷ್ಠಾನದ ಪ್ರಗತಿಯ ಮೇಲ್ವಿಚಾರಣೆ ಬಗ್ಗೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಮಾಹಿತಿ ಆಯೋಗದ ನಡುವೆ ಸಮನ್ವಯ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 102 ಆರ್ ಟಿಐ 2012 ದಿನಾಂಕ: 07.08.2014 ರನ್ವಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರನ್ನು ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
  8. ಅಧಿಸೂಚನೆ ಸಂಖ್ಯೆ: ಡಿಪಿಎಆರ್ 44 ಆರ್ ಟಿ ಐ 2009 ದಿನಾಂಕ: 21.07.2012    ರನ್ವಯ ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1) (ಎ) ಮತ್ತು 4(1) (ಬಿ)ಗಳ ಅನುಷ್ಠಾನದಲ್ಲಿನ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಸರ್ಕಾರದ ಅಪರ  ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ರಾಜ್ಯ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

ಇತ್ತೀಚಿನ ನವೀಕರಣ​ : 30-09-2019 12:51 PM ಅನುಮೋದಕರು: Admin